Posts

Showing posts from 2012

modala nudi

ನಮಸ್ತೆ, ಮನದ ಮಂಥನದಲ್ಲಿ ಆಲೋಚನೆ, ಅಭಿಪ್ರಾಯಗಳೆಂಬ ಅಲೆಗಳು ಮೂಡುತ್ತಲೇ ಇರುತ್ತವೆ, ಅವುಗಳಲ್ಲಿ ಕೆಲಕಾಲ ಚಿತ್ತದಲ್ಲಿದ್ದು ಮತ್ತೆ ಕರಗುವವೇ ಬಹಳ. ಮನಸ್ಸಿಗೆ ತಂಪೆನಿಸಿದ, ಹಿತನೀಡಿದ ಅಂತ ಮಧುರ ಕ್ಷಣಗಳನ್ನ ಕಾವ್ಯದ ರೂಪದಲ್ಲಿ ಸೆರೆಹಿಡಿಯುವ ಪ್ರಯತ್ನ ತಕ್ಕಮಟ್ಟಿಗೆ ಖುಷಿನೀಡಿದೆ. ಆದರೂ ಕೆಲವೊಮ್ಮೆ ಕಾವ್ಯದ ರೂಪದಲ್ಲಿ ಅಲಂಕರಿಸಿದ ಮಾತುಗಳಿಗಿಂತ, ಒಳಾರ್ಥ-ಗೂಡಾರ್ಥಗಳ ಗೊಂದಲಗಳಿಲ್ಲದ, ಪ್ರಾಸಗಳ ಪ್ರಹಸನವಿಲ್ಲದ ಸರಳ ನಿರಾಭರಣ ಧ್ವನಿಗಳು ಮನಕ್ಕೆ ಹತ್ತಿರವಾಗುವ ಸಂಧರ್ಭಗಳು ಅನೇಕ. ಮನದಲ್ಲಿ ಎದ್ದ ಯೋಚನೆ-ಚಿಂತನೆಗಳೊಂದಿಗೆ ಹತ್ತು ರೀತಿಯ ಪ್ರಶ್ನೆಗಳೂ, ಅದಕ್ಕೆ ನೂರು ಉತ್ತರಗಳೂ ಏಳುತ್ತವೆ ಜೊತೆಗೇ ಬದುಕಿಗೆ ಹೊಸ ಅರ್ಥಗಳು-ಒಗಟುಗಳೂ ಸೇರುತ್ತವೆ.ಆ ಒಗಟುಗಳನ್ನು ಬಿಡಿಸುವ ಯತ್ನದಲ್ಲಿ ನಮ್ಮಲ್ಲಿ ಬೇರೂರಿದ ಕೆಲ ನಂಬಿಕೆಗಳು ಬದಲಾಗುತ್ತವೆ, ಬದಲಾವಣೆಗೆ ಸ್ಪಂದಿಸದ ಕೆಲವು ನಂಬಿಕೆಗಳು ಸಾಯಲೂಬಹುದು.. ಒಗಟಿನ ಕ್ಲಿಷ್ಟತೆಗಿಂತ ಬಲವಾದ ನಂಬಿಕೆಗಳು ಉತ್ತರವನ್ನೊಪ್ಪದೇ ಒಗಟಿಗೇ ಒಗಟಾಗುತ್ತವೆ.. ಅಷ್ಟು ಮಾತ್ರಕ್ಕೆ ಜೀವನದಲ್ಲಿ ನಂಬಿಕೆಗಳೂ ಒಗಟುಗಳೂ ಕೊನೆಯಾಗುವುದಿಲ್ಲ, ಕೊನೆಯಾಗಲು ಬಿಡಲೂಬಾರದು. ಚಲನಶೀಲ ಮನಸ್ಸು ಜೀವನವನ್ನು  ಸ್ವಾರಸ್ಯವಾಗಿಸುತ್ತದೆ. ಅಂತಹ ಚಲನಶೀಲ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಹಿಡಿದಿಡುವ ಪ್ರಯತ್ನ ನನ್ನದು. ಧ್ವನಿ ನಮ್ಮದೇ ಆದರ...